Discover and read the best of Twitter Threads about #ಅವಗ್ರಹ

Most recents (1)

Q: #ಅವಗ್ರಹ ಚಿಹ್ನೆಯ (ಽ) ಪದಗಳನ್ನು ಹೇಗೆ ಉಚ್ಚರಿಸಬೇಕು?

A: ಅವಗ್ರಹವನ್ನು ಒಂದು ವಿಶೇಷ ಸನ್ನೆಯಾಗಿ ಬೇರೆಬೇರೆ ಭಾಷೆಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಬಳಸುತ್ತಾರೆ.

ಕನ್ನಡದಲ್ಲಿ ಸಾಧಾರಣವಾಗಿ, ಇದನ್ನು ಹ್ರಸ್ವ ಸ್ವರವನ್ನು ಎಳೆದು ಹೇಳುವಾಗ *ಆದರೆ, ದೀರ್ಘಸ್ವರವನ್ನು ಪ್ರಯೋಗಿಸದೇ ಇರುವಾಗ ತೋರಿಸುತ್ತೇವೆ.

1/3
ಎಂದರೆ, ಅಕ್ಕಽಽ ಮತ್ತು ಅಕ್ಕಾ ಇವೆರಡರ ಉಚ್ಚಾರ ಬೇರೆಬೇರೆಯಾಗಿರುತ್ತದೆ

ಇನ್ನೊಂದೆರಡು ಉದಾಹರಣೆಗಳು:
ನಾ ಬಂದಽ ನಾಕ್ ತಾಸಾಗೇಽದ ಚೆನ್ನಾಗಿ
ಅದೆಷ್ಟ್ ಛಂಽದ ಅದಾಳ

ಆಡುಮಾತನ್ನು ಹೆಚ್ಚು ಕರಾರುವಾಕ್ಕಾಗಿ ತೋರಿಸಲು ಈ ಬಳಕೆ ಅಷ್ಟೇ.

ಕನ್ನಡ ಲಿಪಿಯಲ್ಲಿ ಕೊಂಕಣಿ ಮೊದಲಾದ ಭಾಷೆಗಳನ್ನು ಬರೆಯುವಾಗ ಕೂಡ ಇದು ಬಹಳ ಉಪಯುಕ್ತವಾಗುತ್ತೆ.

2/3
ಇನ್ನು ಸಂಸ್ಕೃತದಲ್ಲಿ ಪೂರ್ವರೂಪ ಪರರೂಪ ಸಂಧಿಗಳಾಗಿರುವುದನ್ನು ತೋರಿಸುವೆಡೆ ಸಾಮಾನ್ಯವಾಗಿ ಅವಗ್ರಹ ಸನ್ನೆಯನ್ನು ಹಾಕುತ್ತಾರೆ. ಆದರೆ ಇಲ್ಲಿ ನಿಜವಾಗಿ ಅವಗ್ರಹ ಹಾಕಿದರೂ ಹಾಕದೇ ಇದ್ದರೂ ಉಚ್ಚಾರಣೆ ಒಂದೇ ಆಗಿರುತ್ತೆ.
ಉದಾ:पद्मनाभोऽरविन्दाक्षः ಇದರ ಉಚ್ಚಾರ पद्मनाभोरविन्दाक्ष: ಎಂದೇ.सर्वेऽपि ಇದರ ಉಚ್ಚಾರ सर्वेपि ಎಂದೇ. 3/3
Read 4 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!